ತ್ರಿಕೂಟೇಶ್ವರ ದೇವಸ್ಥಾನ.ಗದಗ
🔯 ನಮ್ಮ ಸನಾತನ ಸಂಸ್ಕೃತಿ.📖🔯 *ತ್ರಿಕೂಟೇಶ್ವರ ದೇವಸ್ಥಾನ.ಗದಗ.* ತ್ರಿಕೂಟೇಶ್ವರ ದೇವಸ್ಥಾನವು ಶಿವನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ. ಈ ದೇವಸ್ಥಾನವು ಹುಬ್ಬಳ್ಳಿ-ಧಾರವಾಡ ದಿಂದ ಆಗ್ನೇಯ ದಿಕ್ಕಿನಲ್ಲಿ ೫೦ ಕಿ.ಮೀ ದೂರದ ಗದಗ ಪಟ್ಟಣದಲ್ಲಿದೆ,ಇಲ್ಲಿ ಒಂದೇ ಕಲ್ಲಿನ ಮೇಲೆ ಮೂರು ಲಿಂಗಗಳನ್ನು ಅಳವಡಿಸಲಾಗಿದೆಯಲ್ಲದೆ ಈ ದೇವಸ್ಥಾನದಲ್ಲಿ ಸರಸ್ವತಿಗೆ ಸಮರ್ಪಿತವಾದ ಒಂದು ದೇಗುಲವಿದೆ. ಅದರಲ್ಲಿ ಸ್ತಂಭಗಳನ್ನು ಕೆತ್ತಲಾಗಿದೆ. ವಾಸ್ತುಶಿಲ್ಪ. ಈ ದೇವಾಲಯದ ವಾಸ್ತುಶಿಲ್ಪವನ್ನು ಅಮರಶಿಲ್ಪಿ ಜಕಣಾಚಾರಿ ಯೋಜಿಸಿದ್ದಾರೆ. ಬಾದಾಮಿಯ ಚಾಲುಕ್ಯರು ದಕ್ಷಿಣದ ಆರಂಭಿಕ ವಾಸ್ತುಶಿಲ್ಪದ ಪ್ರವರ್ತಕರು. ಐಹೊಳೆ, ಬಾದಾಮಿ ಮತ್ತು ಪಟ್ಟದಕಲ್ಲು ಅವರ ಕಲಾಕೇಂದ್ರಗಳಾಗಿದ್ದವು. ಅವರ ನಂತರ ರಾಷ್ಟ್ರಕೂಟರು ಮತ್ತು ಕಲ್ಯಾಣಿ ಚಾಲುಕ್ಯರು ಆಳಿದರು . ದೇವಾಲಯವು ಸಂಕೀರ್ಣವಾದ ಶಿಲ್ಪಕಲೆಯೊಂದಿಗೆ ಅಲಂಕೃತ ಕಂಬಗಳನ್ನು ಹೊಂದಿದೆ.ಗರ್ಭಗೃಹದಲ್ಲಿ ಮೂರು ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯದಲ್ಲಿ ನಾವು ಕಲ್ಲಿನ ಪರದೆಗಳನ್ನು, ಕೆತ್ತಿದ ಪ್ರತಿಮೆಗಳನ್ನು ನೋಡಬಹುದು. ತ್ರಿಕುಟೇಶ್ವರ ದೇವಾಲಯದ ಸಂಕೀರ್ಣದಲ್ಲಿ ಸುಂದರ ಕೆತ್ತನೆಯ ಕಲ್ಲಿನ ಸ್ತಂಭಗಳಿರುವ ಸರಸ್ವತಿಯ ದೇಗುಲವೂ ಇದೆ. ಬಾಲ್ಕನಿಯ ಆಸನಗಳಂತೆ ಇಳಿಜಾರಾದ ಚಪ್ಪಡಿಗಳನ್ನು ಸಾಂಕೇತಿಕ ಫಲಕಗಳಿಂದ ಅಲಂಕರಿಸಲಾಗಿದ್ದು, ಕಡಿದಾದ ಇಳಿಜಾರಾದ ಸೂರುಗಳ ನಿರ್ಮಾಣವಿದೆ. ಸಭಾಂಗಣದ ಒಳಗೆ,...